ಕಾರೊ, ಆನ್ನಿಬಾಲೆ

 1507-1566, ಇಟಲಿಯ ಕವಿ. ಪಂಡಿತ, ಪ್ರಾಕ್ತನಶಾಸ್ತ್ರ ವಿಮರ್ಶಕ. ಸೆಲಿನಿ, ವರ್ಚಿ ಮತ್ತು ಬೆಂಬೊ ಮೊದಲಾದವರ ಸ್ನೇಹಿತ. ಪೆಟ್ರಾರ್ಕನ ಪ್ರಭಾವಕ್ಕೊಳಗಾಗಿ ಹಲವು ಸುಂದರ ಭಾವಗೀತೆಗಳನ್ನು ರಚಿಸಿದ. ವರ್ಜಿಲ್ ಕವಿಯ ಈನಿಯಡ್ ಕಾವ್ಯವನ್ನು ಸರಳರಗಳೆಯಲ್ಲೂ ಲಾಂಗಸ್‍ನ ಡಾಫ್ನೆ ಮತ್ತು ಕ್ಲೋ ಎಂಬ ಕಾವ್ಯವನ್ನು ಗದ್ಯರೂಪದಲ್ಲೂ ಇಟಲಿ ಭಾಷೆಗೆ ಅನುವಾದ ಮಾಡಿದ. ರೋಮಿನ ನಿತ್ಯಜೀವನದ ಆಧಾರದ ಮೇಲೆ ರಚಿತವಾದ ಈತನ ಚಿಂದಿ ಬಟ್ಟೆಯ ಸಹೋದರರು ಎಂಬ ಪ್ರಹಸನ ಜನಪ್ರಿಯತೆ ಗಳಿಸಿತ್ತು.            

(ಎಚ್.ಕೆ.ಆರ್.)